ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಳಗಾವಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

wrappixel kit

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಳಗಾವಿ

ಮಾನ್ಯ ಘನ ಸರ್ಕಾರವು ಶಿಕ್ಷಣ ಮತ್ತು ಆಡಳಿತವನ್ನು ಚುರುಕಗೊಳಿಸುವ ಸದುದ್ದೇಶದಿಂದ 2003-04ನೇ ಸಾಲಿನಲ್ಲಿ ಅಧಿಕಾರವನ್ನು ವಿಕೇಂದ್ರಿಕರಿಸಿ ಕರ್ನಾಟಕ ರಾಜ್ಯದ ಧಾರವಾಡ ಮತ್ತು ಗುಲ್ಬರ್ಗಾ ಜಿಲ್ಲೆಯಲ್ಲಿ ಆಪರ   ಆಯುಕ್ತರ ಕಾರ್ಯಾಲಯವನ್ನು ತೆರೆದು ಆಪರ ಆಯುಕ್ತರನ್ನು ನೇಮಿಸಿ ಅವರನ್ನು ಮುಖ್ಯಸ್ತರನ್ನಾಗಿ ನೇಮಕ ಮಾಡಿರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವಂತಹ ನಿರ್ದೇಶನಾಲಯಗಳಲ್ಲಿ ಒಂದಾಗಿರುವ ನಿರ್ದೇಶಕರು ಸಂಶೋಧನೆ ಮತ್ತು  ತರಬೇತಿ ಸಂಸ್ಥೆ, ಬೆಂಗಳೂರು ಈ ಒಂದು ನಿರ್ದೇಶನಾಲಯವು ರಾಜ್ಯದ ಎಲ್ಲಾ ತರಬೇತಿ ಸಂಸ್ಥೆಗಳ ಮುಖ್ಯ ಆಡಳಿತ  ಕಾರ್ಯವು ಆಗಿರುತ್ತದೆ. ಈ ನಿರ್ದೇಶನಾಲಯದ ಅಡಿಯಲ್ಲಿ ಜಿಲ್ಲಾ  ಶಿಕ್ಷಣ  ಮತ್ತು ತರಬೇತಿ ಸಂಸ್ಥೆ, ಮಣ್ಣೂರ, ಬೆಳಗಾವಿ ಈ ಕಾರ್ಯಾಲಯವು ಸರ್ಕಾರಿ ಆದೇಶ ಸಂಖ್ಯೆ :ಇಡಿ 85:ಎಮ.ಪಿ.ಇ. 1993 ದಿನಾಂಕ :27/07/1994 ರಂತೆ ಕಾರ್ಯ ನಿರ್ವಹಿಸುತ್ತಿದೆ.    ಜಿಲ್ಲಾ ಕ್ಷೇತ್ರದ ಅಡಿಯಲ್ಲಿ ಶೈಕ್ಷಣಿಕ  ಗುಣಮಟ್ಟ ಹಾಗೂ ಆಡಳಿತ ಸುಭದ್ರತೆ ಮತ್ತು  ಸುವ್ಯವಸ್ಥೆಗಾಗಿ 7 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ 7 ಸಮನ್ವಯಾಧಿಕಾರಿಗಳು ಕಾರ್ಯಾಲಯ  ಸ್ತಾಪಿತವಾಗಿದ್ದು ತನ್ಮೂಲಕ ವಲಯ ಮಟ್ಟದಲ್ಲಿ 497 ಸಮೂಹ ಸಂಪನ್ಮೂಲ ಕೇಂದ್ರಗಳು ಸ್ಥಾಪಿತವಾಗಿ ಕಾರ್ಯ ನಿರ್ವಹಣೆಯನ್ನು ಮಾಡುತ್ತಿವೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ  ಸಂಸ್ಥೆಯ, ಮಣ್ಣೂರ, ಬೆಳಗಾವಿ ಶಿಕ್ಷಣದ ಸ್ಯಾಯತ್ತತಾ ಅವಿಬಾಜ್ಯ ಅಂಗವಾಗಿದ್ದು  ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣದ ಏಳ್ಗೆಗಾಗಿ ಸದಾ ದುಡಿಯುತ್ತಿದೆ.

ಮತ್ತಷ್ಟು ಓದಿ

×
ABOUT DULT ORGANISATIONAL STRUCTURE PROJECTS